¡Sorpréndeme!

News Cafe | ಇನ್ಮುಂದೆ ಅಕ್ರಮ ಮೈಕ್‍ಗಳ ಬೇಟೆ ಶುರು..! | HR Ranganath | June 15, 2022

2022-06-15 17 Dailymotion

ರಾಜ್ಯದಲ್ಲಿ ಮೈಕ್ ದಂಗಲ್‍ಗೆ ಇತಿಶ್ರೀ ಹಾಡಲು ಸರ್ಕಾರ, ಅಕ್ರಮ ಮೈಕ್‍ಗಳನ್ನು ಸಕ್ರಮ ಮಾಡಿಕೊಳ್ಳಲು ಗಡುವು ನೀಡಿತ್ತು. ಈ ಗಡುವು ನಿನ್ನೆ ಅಂತ್ಯವಾಗಿದೆ. ಹೀಗಾಗಿ, ಈಗಲೂ ಅಕ್ರಮ ಮೈಕ್‍ಗಳ ಬಳಕೆ ಮಾಡ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ. ಇಂದಿನಿಂದಲೇ ಯಾವುದೇ ರೀತಿಯ ವಿನಾಯ್ತಿ ನೀಡದೇ ಕ್ರಮ ಕೈಗೊಳ್ಳಲಿದ್ದಾರೆ. ಈವರೆಗೆ ಬೆಂಗಳೂರಿನಲ್ಲಿ 850ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳ ಮೈಕ್‍ಗೆ ಪೊಲೀಸರು ಅನುಮತಿ ಕೊಟ್ಟಿದ್ದಾರೆ. ಇದರಲ್ಲಿ ಮಸೀದಿಗಳೇ ಹೆಚ್ಚು ಅರ್ಜಿ ಹಾಕಿ ಮೈಕ್‍ಗೆ ಅನುಮತಿ ಪಡೆದುಕೊಂಡಿವೆ. ಹಾಗಾದ್ರೆ, ಎಷ್ಟು ಪ್ರಾರ್ಥನಾ ಮಂದಿರಗಳು ಎಷ್ಟು ಅರ್ಜಿ ಹಾಕಿದ್ವು.. ಅನುಮತಿ ಸಿಕ್ಕಿದ್ದೆಷ್ಟು ಅಂತ ನೋಡೋದಾದರೆ..

#publictv #newscafe #hrranganath